ಕೋಲ್ಕತಾ, ಡಿ.10 (DaijiworldNews/PY): ಡೈಮಂಡ್ ಹಾರ್ಬರ್ಗೆ ತೆರಳುತ್ತಿದ್ದ ಸಂದರ್ಭ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ಪಡೆಯ ವಾಹನಗಳ ಮೇಲೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ.
ಜೆ.ಪಿ. ನಡ್ಡಾ ಅವರೊಂದಿಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯಾ ಅವರ ಕಾರಿನ ಮೇಲೂ ಕೂಡಾ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ನಡ್ಡಾ ವರ ಕಾರು ಬುಲೆಟ್ ಪ್ರೂಫ್ ಆಗಿದ್ದ ಜಾರಣ ಅವರು ಸುರಕ್ಷಿತವಾಗಿದ್ದಾರೆ. ಆದರೆ, ಕೈಲಾಶ್ ವಿಜಯವರ್ಗಿಯಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾಳಿಯಲ್ಲಿ ಕನಿಷ್ಠ ಸುಮಾರು 15 ವಾಹನಗಳು ಜಖಂಗೊಂಡಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ದಿಲೀಪ್ ಘೋಷ್, "ನಮ್ಮ ವಾಹನಗಳು ಡೈಮಂಡ್ ಹಾರ್ಬರ್ನತ್ತ ತೆರಳುತ್ತಿತ್ತು. ಈ ವೇಳೆ ನಮ್ಮ ವಾಹನಗಳನ್ನು ಟಿಎಂಸಿ ಬೆಂಬಲಿಗರು ಅಡ್ಡಗಟ್ಟಿದ್ದು, ವಾಹನಗಳ ಮೇಲರ ಕಲ್ಲು ತೂರಿದ್ದಾರೆ. ಇದರಿಂದ ಟಿಎಂಸಿಯ ನಿಜ ಬಣ್ಣ ಬಯಲಾಗಿದೆ" ಎಂದಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಗೂಂಡಾರಾಜ್ಯದ ಆಡಳಿತ ನಡೆಯುತ್ತಿದೆ" ಎಂದು ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.