ಅಗರ್ತಲ,ಡಿ.10 (DaijiworldNews/HR): ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸಲು ಬಿಜೆಪಿಯ ನಾಯಕತ್ವ ಮುಂದಾಗಿರುವ ಕಾರಣ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕೇ ಎಂದು ಜನಾಭಿಪ್ರಾಯ ಸಂಗ್ರಹಿಸಲು ತಾನು ಕರೆದಿದ್ದ ಸಾರ್ವಜನಿಕ ಸಭೆಯನ್ನು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ರದ್ದುಪಡಿಸಿದ್ದಾರೆ.
ರಾಜ್ಯದ ಜನರು ತಾನುಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಬಯಸಿದರೆ ನಾನು ಅವರು ಹೇಳಿದಂತೆ ಮಾಡುತ್ತೇನೆ ಎಂದು ದೇಬ್ ಹೇಳಿಕೆ ನೀಡಿದ ಬಳಿಕ ಸೋನ್ಕರ್ ಅವರು ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಬಳಿ ಮಾತನಾಡಿದ್ದಾರೆ. ಯಾವುದೇ ಸಭೆಯನ್ನು ಕರೆಯದಂತೆ ದೇಬ್ ಗೆ ಜೆಪಿ ನಡ್ಡಾ ಸೂಚಿಸಿದ್ದಾರೆ.
ಇನ್ನು ಆಡಳಿತದ ಕುರಿತು ಗಮನ ಹರಿಸುವಂತೆ ಬಿಜೆಪಿ ನಾಯಕತ್ವದ ಬಿಪ್ಲಬ್ ಕುಮಾರ್ ದೇಬ್ಗೆ ಸೂಚಿಸಿದ್ದು, ಅವರು ಇತರ ನಾಯಕರನ್ನು ಸಂಪರ್ಕಿಸದೇ ಸರಕಾರವನ್ನು ನಡೆಸುತ್ತಿದ್ದಾರೆ ಎಂದು ಪಕ್ಷದ ಸದಸ್ಯರು ದೂರಿದ್ದಾರೆ.