ಬೆಂಗಳೂರು, ಡಿ.10 (DaijiworldNews/PY): ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನಸಭೆ ಕಲಾಪವನ್ನು ಬಹಿಷ್ಕರಿಸಿ, ವಿಧಾನ ಪರಿಷತ್ ಕಲಾಪದಲ್ಲಿ ಮಾತ್ರ ಭಾಗವಹಿಸುವ ವಿಚಾರವಾಗಿ ಚರ್ಚೆ ನಡೆದಿದೆ.
ವಿಧಾನಸೌಧದಲ್ಲಿರುವ ಮೊದಲ ಮಹಡಿಯಲ್ಲಿ ಈ ಸಭೆ ನಡೆದಿದ್ದು, ಪರಿಷತ್ನ ಕಲಾಪದಲ್ಲಿ ಮಾತ್ರ ಪಾಲ್ಗೊಂಡು ಗೋ ಹತ್ಯೆ ನಿಷೇಧ ಕಾಯ್ದೆ ಮೇಲಿನ ಚರ್ಚೆಯ ನಂತರ ವಿಭಜನೆ ಮತಕ್ಕೆ ಆಗ್ರಹಿಸಲು ಕೈ ನಾಯಕರು ತೀರ್ಮಾನ ಕೈಗೊಂಡಿದ್ದಾರೆ.
ಭಾರೀ ವಿರೋಧದ ನಡುವೆಯೂ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕರಿಸಿದ ಆಡಳಿತ ಪಕ್ಷದ ನಡೆಗೆ ಶಾಸಕರು ಆಕ್ರೋಶಗೊಂಡಿದ್ದಾರೆ.
ಶಾಸಕಾಂಗ ಸಭೆಯಲ್ಲಿ ಕೆಪಿಸಿಸ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆ.ಜೆ. ಜಾರ್ಜ್, ಜಿ. ಪರಮೇಶ್ವರ, ಎಸ್.ಆರ್.ಪಾಟೀಲ, ಎಂ.ಬಿ. ಪಾಟೀಲ ಸೇರಿದಂತೆ ವಿಧಾನಪರಿಷತ್ ಸದಸ್ಯರು ಪಾಲ್ಗೊಂಡಿದ್ದರು