ಔರಂಗಾಬಾದ್, ಡಿ.10 (DaijiworldNews/PY): "ನೂತನ ಕೃಷಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಎಂದು ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ಪಾಕ್ ಹಾಗೂ ಚೀನಾದ ಕೈವಾಡವಿದೆ" ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಹೇಳಿದ್ದಾರೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಬದ್ನಾಪುರ್ ತಾಲೂಕಿನ ಕೋಲ್ಟೆ ಟಾಕ್ಲಿ ಎಂಬಲ್ಲಿ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, "ಇದಕ್ಕೂ ಮುನ್ನ ಮುಸ್ಲಿಮರು ಸಿಎಎ ಹಾಗೂ ಎನ್ಆರ್ಸಿಯ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದು, ದೇಶದ ಜನರ ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿದ್ದರು. ಆದರೆ, ಅವರು ನಡೆಸಿದ್ದ ಹೋರಾಟ ಸಫಲವಾಗಲಿಲ್ಲ. ಈಗ ನೂತನ ಕೃಷಿ ಕಾಯ್ದೆಯಿಂದ ನನಗೆ ನಷ್ಟ ಉಂಟಾಗುತ್ತಿದೆ ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ಪಾಕ್ ಹಾಗೂ ಚೀನಾದ ಕೈವಾಡವಿದೆ. ಈ ಬಗ್ಗೆ ದಾನ್ವೆ ಅವರು ವಿಸ್ಕೃತವಾಗಿ ಯಾವುದೇ ರೀತಿಯಾದ ವಿವರನೆ ನೀಡಿಲ್ಲ ಎಂದು ವರದಿ ತಿಳಿಸಿದೆ.
"ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ. ಅವರು ಎಂದಿಗೂ ಕೂಡಾ ರೈತ ವಿರೋಧಿ ತೀರ್ಮಾನಗಳನ್ನು ಕೈಗೊಳ್ಳುವುದಿಲ್ಲ" ಎಂದಿದ್ದಾರೆ.