ನವದೆಹಲಿ,ಡಿ.10 (DaijiworldNews/HR): ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ರೂಪಿಸಲಾಗಿರುವ ಆತ್ಮನಿರ್ಭರ ಭಾರತ್ ರೋಜ್ಗಾರ್ ಯೋಜನೆಗೆ 22,810 ಕೋಟಿ ರೂ. ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ನೂತನವಾಗಿ ಉದ್ಯೋಗ ನೀಡುವ ಉದ್ಯಮಗಳು ಮತ್ತು ಸಂಸ್ಥೆಗಳಲ್ಲಿನ ಉದ್ಯೋಗಿಗಳು ಮತ್ತು ಉದ್ಯೋಗದಾತರ ಪಾಲಿನ ಪಿಎಫ್ ನಿಧಿಯನ್ನು 2 ವರ್ಷಗಳ ಕಾಲ ಸರ್ಕಾರವೇ ಭರಿಸದ್ದು, 2023ರ ವರೆಗೆ ಈ ಯೋಜನೆ ಚಾಲ್ತಿಯಲ್ಲಿರಲಿದ್ದು, 58.5 ಲಕ್ಷ ಉದ್ಯೋಗಿಗಳಿಗೆ ನೆರವಾಗಲಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಯೋಜನೆಯ ಮೊದಲ ಹಂತವನ್ನು ನ.12ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ಗೊಳಿಸಿದ್ದರು. ಈಗ 3ನೇ ಹಂತದ ಯೋಜನೆಯಾಗಿದ್ದು, ಪ್ರಸಕ್ತ ಹಣಕಾಸು ವರ್ಷಕ್ಕಾಗಿ 1,584 ಕೋಟಿ ರೂ. ಬಿಡುಗಡೆಯಾಗಿದೆ.