ನಾಗ್ಪುರ, ಡಿ.10 (DaijiworldNews/PY): ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ತಾಯಿ ಮುಕ್ತಾ ಬೋಬ್ಡೆ ಅವರಿಗೆ 2.5 ಕೋಟಿ. ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕುಟುಂಬದ ಆಸ್ತಿ ನೋಡಿಕೊಳ್ಳುತ್ತಿದ್ದ ತಪಸ್ ಘೋಷ್ (49) ವಂಚನೆ ಮಾಡಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡಿಸಿಪಿ ವಿನಿತಾ ಸಾಹು ಅವರ ನೇತೃತದಲ್ಲಿ ತನಿಖಾ ತಂಡ ರಚಿಸಲಾಗಿದೆ. ಆ ತಂಡ ತನಿಖಾ ನೇತೃತ್ವವನ್ನು ವಹಿಸಿಕೊಂಡಿದ ಎಂದು ನಾಗ್ಪುರ ಪೊಲೀಸ್ ಅಮಿತೇಶ್ ಕುಮಾರ್ ಹೇಳಿದ್ದಾರೆ.
ಸಿಜೆಐ ತಾಯಿ ಮುಕ್ತಾ ಬೋಬ್ಡೆ ಅವರು ನಾಗ್ಪುರ ಆಕಾಶವಾಣಿ ಸ್ಕ್ವೇರ್ ಸಮೀಪ ಇರುವ ಹಾಲ್ನ ಮಾಲೀಕತ್ವವನ್ನು ಹೊಂದಿದ್ದು, ಅದರ ಕಾರ್ಯಕ್ರಮಗಳನ್ನು ಆಯೋಜಿಸಲು ಬಾಡಿಗೆಗೆ ನೀಡಲಾಗುತ್ತಿತ್ತು. ಇದನ್ನು ನೋಡಿಕೊಳ್ಳಲು 2007ರಲ್ಲಿ ತಪಸ್ ಘೋಷ್ನನ್ನು ನೇಮಕ ಮಾಡಲಾಗಿತ್ತು. ಮುಕ್ತಾ ಬೋಬ್ಡೆ ಅವರ ವೃದ್ದಾಪ್ಯ ಹಾಗೂ ಆರೋಗ್ಯ ಸ್ಥಿತಿ ಹದಗೆಟ್ಟಿರುವುದರ ಲಾಭ ಪಡೆದುಕೊಂಡ ಘೋಷ್ ಭೂಮಿಗೆ ಸಂಬಂಧಿಸಿದಂತೆ ಪಾವತಿ ರಶೀದಿಗಳನ್ನು ನಕಲಿ ಮಾಡಿ 2.5 ಕೋಟಿ.ರೂಗಳನ್ನು ವಂಚಿಸಿದ್ದಾನೆ.
ಘೋಷ್ ಹಾಗೂ ಆತನ ಪತ್ನಿ ಕಾರ್ಯಕ್ರಮಗಳಿಂದ ಬಂದ ಮೊತ್ತವನ್ನು ಮುಕ್ತಾ ಬೋಬ್ಡೆ ಅವರ ಖಾತೆಗೆ ಜಮೆ ಮಾಡುತ್ತಿರಲಿಲ್ಲ. ವಂಚನೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಎಸ್ಐಟಿ ತಂಡ ರಚಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ.
ಈ ಬಗ್ಗೆ ಸೀತಾಬುಲ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿಂದೆ ಘೋಷ್ನನ್ನು ವಿಚಾರಣೆ ನಡೆಸಲಾಗಿತ್ತು. ನಂತರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.