ಬದ್ಗಾಮ್, ಡಿ.10 (DaijiworldNews/PY): ಬದ್ಗಾಮ್ನಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಶೋಧ ಕಾರ್ಯಾಚರಣೆ ಮಾಡುತ್ತಿದ್ದ ಸಂದರ್ಭ ಜೈಶ್-ಎ-ಮೊಹಮ್ಮದ್ ಉಗ್ರ ತಾರಿಕ್ ಅಹ್ಮದ್ ಭಟ್ನನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಬಂಧಿತ ಉಗ್ರನಿಂದ ಪಿಸ್ತೂಲ್, ಮದ್ದುಗುಂಡು ಹಾಗೂ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಬುಧವಾರ ರಾತ್ರಿ ಜಮ್ಮು-ಕಾಶ್ಮೀರದ ಆರ್.ಎಸ್.ಪುರಾ ಸೆಕ್ಟರ್ನ ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿ ಡ್ರೋನ್ ಚಾಲನೆ ಕಂಡುಬಂದಿದ್ದು, ಈ ವೇಳೆ ಭದ್ರತಾ ಪಡೆಗಳು ಡ್ರೋನ್ ಮೇಲೆ ಗುಂಡು ಹಾರಿಸಿದ ನಂತರ ಡ್ರೋನ್ ಹಿಂತಿರುಗಿದೆ" ಎಂದು ಬಿಎಸ್ಎಫ್ ಹೇಳಿದೆ.
ನ.30ರಂದು ಕುಪ್ವಾರದಲ್ಲಿ ಜೆಎಎಂ ಭಯೋತ್ಪಾದಕನ ಸಹಚರನನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದರು.
ಜಮ್ಮು-ಕಾಶ್ಮೀರದ ನಾಗ್ರೋಟಾದಲ್ಲಿ ಕಳೆದ ತಿಂಗಳು ಭದ್ರತಾ ಪಡೆಗಳ ಹಾಗು ಉಗ್ರ ನಡುವೆ ನಡೆ ಗುಂಡಿನ ಚಕಮಕಿಯ ವೇಳೆ ನಾಲ್ವರು ಜೆಎಎಂ ಭಯೋತ್ಪಾದಕರು ಸಾವನ್ನಪ್ಪಿದ್ದರು. ಅವರಿಂದ 11 ಎಕೆ -47 ರ ರೈಫಲ್ಗಳು, 3 ಪಿಸ್ತೂಲ್ಗಳು, 29 ಗ್ರೆನೇಡ್ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.