ನವದೆಹಲಿ, ಡಿ.10 (DaijiworldNews/PY): ನೂತನ ಸಂಸತ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ.10ರ ಗುರುವಾರದಂದು ಅಡಿಗಲ್ಲು ಹಾಕಲಿದ್ದಾರೆ.
ಮಧ್ಯಾಹ್ನ 12.50ಕ್ಕೆ ಸಂಸತ್ ಭವನದ ಆವರಣದಲ್ಲಿನ ನಿಯೋಜಿತ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ನಂತರ ಅಡಿಗಲ್ಲು ಹಾಕಲಿದ್ದು, 2.15ಕ್ಕೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಈ ಕಟ್ಟಡವನ್ನು ಭೂಕಂಪನ ನಿರೋಧಕ ವ್ಯವಸ್ಥೆಯಡಿ ನಿರ್ಮಿಸಲಾಗುತ್ತಿದ್ದು, ನೇರವಾಗಿ 2000 ಮಂದಿ ಹಾಗೂ ಪರೋಕ್ಷವಾಗಿ 9,000 ಮಂದಿ ಇದರ ನಿಮಾಣ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಇನ್ನು ಈ ಕಟ್ಟಡ ಸುಮಾರು 64,500 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಇದರ ನಿರ್ಮಾಣಕ್ಕೆ ಸುಮಾರು 971 ಕೋಟಿ. ರೂ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.