ಬೆಂಗಳೂರು, ಡಿ.09 (DaijiworldNews/PY): ಪ್ರತಿಪಕ್ಷಗಳ ತೀವ್ರವಾದ ವಿರೋಧದ ನಡುವೆಯೇ ರಾಜ್ಯದಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಪಟ್ಟ ಮಸೂದೆಯನ್ನು ಡಿ.9 ಬುಧವಾರದಂದು ವಿಧಾನಸಭೆ ಕಲಾಪದಲ್ಲಿ ಮಂಡನೆ ಮಾಡಲಾಯಿತು.
ಮಸೂದೆ ಮಂಡನೆಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದವು. ಅಲ್ಲದೇ, ಪ್ರತಿಪಕ್ಷದ ಸದಸ್ಯರು ಧರಣಿಗೆ ಮುಂದಾದ ಕಾರಣ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಮಸೂದೆ ಮಂಡನೆಗೂ ಮೊದಲು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು ವಿಧಾನಸೌಧದ ಪೂರ್ವ ದ್ವಾರದಲ್ಲಿ ಗೋಪೂಜೆ ನೆರವೇರಿಸಿದರು.
ಎತ್ತು, ಹಸು, ಎಮ್ಮೆ, ಕೋಣ, ಕರುಗಳನ್ನು ವಧೆ ಮಡುವುದಕ್ಕೆ ರಾಜ್ಯದಲ್ಲಿ ನಿಷೇಧ ವಿಧಿಸಲಾಗಿದೆ.