ನವದೆಹಲಿ, ಡಿ.09 (DaijiworldNews/MB) : ''ದೇಶದಲ್ಲಿ ಕೊರೊನಾ ಸೋಂಕಿತರ ಮನೆಯ ಹೊರಗೆ ಪೋಸ್ಟರ್ಗಳು ಅಥವಾ ಯಾವುದೇ ಸಂಕೇತಗಳನ್ನು ಅಂಟಿಸಬಾರದು'' ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕೊರೊನಾ ಸೋಂಕಿತರ ಮನೆಯ ಹೊರಗೆ ನೋಟಿಸ್ ಹಚ್ಚಬಾರದೆಂದು ನಿರ್ದೇಶನ ನೀಡಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನ ಕೈಗೆತ್ತಿಕೊಂಡ ನ್ಯಾಯಪೀಠವು ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಕೊರೊನಾ ಸೋಂಕಿತರ ಮನೆ ಹೊರಗೆ ನೋಟಿಸ್ ಅಂಟಿಸಬಾರದು ಎಂದು ಜಸ್ಟಿಸ್ ಅಶೋಕ್ ಭೂಷಣ್ ಹಾಗೂ ಎಂ ಆರ್ ಶಾ ಅವರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠವು ತಿಳಿಸಿದೆ.
ಈಗಾಗಲೇ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಹಾಗಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ರೀತಿಯ ಪೋಸ್ಟರ್ಗಳನ್ನು ಹಾಕಬಾರದು ಎಂದು ತೀರ್ಪು ನೀಡಿದೆ.