ಜೈಪುರ್, ಡಿ.09 (DaijiworldNews/PY): ರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭರ್ಜರಿ ಜಯ ಸಾಧಿಸಿದ್ದು, ಆಡಳಿತರೂಢ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.
4,371 ಪಂಚಾಯತ್ ಸಮಿತಿ ಸ್ಥಾನಗಳಲ್ಲಿ ಬಿಜೆಪಿ 1,835 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 1,718 ಸ್ಥಾನಗಳಲ್ಲಿ ಜಯ ಗಳಿಸಿದೆ.
ರಾಜ್ಯದ 636 ಜಿಲ್ಲಾ ಪರಿಷತ್ ವಾರ್ಡ್ಗಳಲ್ಲಿ ಬಿಜೆಪಿ 312 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ಪಂಚಾಯತ್ ಚುನಾವಣೆಯಲ್ಲಿ 422 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 56 ವಾರ್ಡ್ಗಳಲ್ಲಿ ಆರ್ಎಲ್ಪಿ , ಸಿಪಿಎಂ 16 ವಾರ್ಡ್ಗಳಲ್ಲಿ ಹಾಗೂ ಮೂರು ವಾರ್ಡ್ಗಳಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ ಜಯ ಸಾಧಿಸಿದೆ" ಎಂದು ಆಯೋಗ ತಿಳಿಸಿದೆ.
"ಮಂಗಳವಾರ ರಾತ್ರಿ ರಾಜ್ಯದ 21 ಜಿಲ್ಲಾ ಪರಿಷತ್ ಕ್ಷೇತ್ರದ 636 ವಾರ್ಡ್ಗಳಲ್ಲಿ 597 ವಾರ್ಡ್ಗಳ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದ್ದು, ಈ ಪೈಕಿ 312 ವಾರ್ಡ್ಗಳಲ್ಲಿ ಬಿಜೆಪಿ, 239 ವಾರ್ಡ್ಗಳಲ್ಲಿ ಕಾಂಗ್ರೆಸ್ ಹಾಗೂ 10 ವಾರ್ಡ್ಗಳಲ್ಲಿಆರ್ಎಲ್ಪಿ ಗೆಲುವು ಸಾಧಿಸಿದೆ" ಎಂದು ಆಯೋಗ ತಿಳಿಸಿದೆ.
11 ಜಿಲ್ಲಾ ಪರಿಷತ್ನಲ್ಲಿ ಬಿಜೆಪಿ ಬಹುಮತ ಪಡೆದಿದ್ದು, ಕಾಂಗ್ರೆಸ್ 5 ಜಿಲ್ಲಾ ಪರಿಷತ್ನಲ್ಲಿ ಪೂರ್ಣ ಬಹುಮತ ಪಡೆದಿದೆ.