ನವದೆಹಲಿ,ಡಿ. 08 (DaijiworldNews/HR): ಒಡಿಶಾ ಮೂಲದ ಕಬ್ಬಿಣ ಉತ್ಪನ್ನಗಳ ವಹಿವಾಟು ಮತ್ತು ಉತ್ಪಾದನೆ ಸಂಸ್ಥೆಯ ಕಚೇರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ದಾಖಲೆಯಿಲ್ಲದ 170 ಕೋಟಿ ಆದಾಯ ಹೊಂದಿರುವುದನ್ನು ಪತ್ತೆಯಾಗಿದ್ದು, ದಿನಗೂಲಿ ನೌಕರರನ್ನೇ ಸಂಸ್ಥೆಯು ತನ್ನ ನಿರ್ದೇಶಕರಾಗಿ ಬಿಂಬಿಸಿತ್ತು ಎಂದು ತಿಳಿದು ಬಂದಿದೆ.
ಇನ್ನು ಒಡಿಶಾದ ರೂರ್ಕೆಲಾದಲ್ಲಿ ಇರುವ ಸಂಸ್ಥೆಯ ಕಚೇರಿಯ ಮೇಲೆ ಅಧಿಕಾರಿಗಳು ಡಿಸೆಂಬರ್ 3ರಂದು ದಾಳಿ ನಡೆಸಿದ್ದು, ಎರಡು ಹಣಕಾಸು ವರ್ಷಗಳಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ 17 ನಕಲಿ ಸಂಸ್ಥೆಗಳಿಂದ 170 ಕೋಟಿ ಮೌಲ್ಯದ ನಕಲಿ ಖರೀದಿ ಕುರಿತ ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ. ಸಂಸ್ಥೆಯ ಮೂಲ ಹೆಸರು ಪತ್ತೆ ಹಚ್ಚಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.