ಚಿಕ್ಕಮಗಳೂರು,ಡಿ. 08 (DaijiworldNews/HR): ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ವ್ಯವಸ್ಥಿತ ಷಡ್ಯಂತ್ರ ದೇಶದ ಹೊರಗಿನಿಂದ ನಡೆಯುತ್ತಿದ್ದು, ಭಾರತವನ್ನು ಇಬ್ಭಾಗ ಮಾಡಲು ಖಲಿಸ್ತಾನ ಪ್ರತ್ಯೇಕಿಸಲು ಸಂಚು ನಡೆಯುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಮ್ಶಾತನಾಡಿದ ಅವರು,"ಈ ಸಂಚಿನ ಹಿಂದೆ ಖಲಿಸ್ತಾನ ಚಳಿವಳಿಯಲ್ಲಿ ಸಕ್ರಿಯರಾಗಿದ್ದ ಕಾರ್ಯಕರ್ತರ ಕೈವಾಡ ಇದೆ. ಚಳವಳಿಯಲ್ಲಿದ್ದ ಹಲವರು ಲಂಡನ್, ಕೆನಡಾ ಇತರೆಡೆ ಇದ್ದಾರೆ. ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ' ಎಂದರು.
ಇನ್ನು "ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ತುಕ್ಡೆ ಗ್ಯಾಂಗ್ನವರು, ದೇಶದ್ರೋಹಿಗಳು ಈಗ ಹೋರಾಟದಲ್ಲಿ ಭಾಗವಹಿಸಿದ್ದಾರೆ" ಎಂದು ಹೇಳಿದ್ದಾರೆ.