ಬಾಗಲಕೋಟೆ, ಡಿ. 08 (DaijiworldNews/HR): ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್.ಕಂಠಿಯವರ ಪತ್ನಿ ಮರಿಬಸಮ್ಮ ಕಂಠಿ ಮಂಗಳವಾರ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
ಮರಿಬಸಮ್ಮ(102) ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರನಲ್ಲಿದ್ದು, ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು ಇಂದು ನಿಧನರಾಗಿದ್ದಾರೆ.
ಇನ್ನು ಮೃತರಿಗೆ ಹಣಕಾಸು ಆಯೋಗದ ಮಾಜಿ ಸದಸ್ಯ, ಶಿಕ್ಷಣ ತಜ್ಞ ಮಹೇಂದ್ರ ಕಂಠಿ ಹಾಗೂ ಬಳಗ ಇದ್ದಾರೆ.
ಕಾಂಗ್ರೆಸ್ ಸದಸ್ಯರಾಗಿದ್ದ ಮಾಜಿ ಮುಖ್ಯಮಂತ್ರಿ ಕಂಠಿ ಅವರು 1956 ರಿಂದ 1962 ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದು, ಬಳಿಕ 1962 ರಲ್ಲಿ 96 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.