ಬೆಂಗಳೂರು,ಡಿ. 08 (DaijiworldNews/HR): ವಿಧಾನಸಭೆಯ ಕಲಾಪವನ್ನು ಕೊರೊನಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಡಿಸೆಂಬರ್ 10 ಗುರುವಾರಕ್ಕೆ ಅಂತ್ಯಗೊಳಿಸಬೇಕೆಂದು ಇಂದು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಡಿ. 7 ರಂದು ಪ್ರಾರಂಭವಾಗಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ಕಲಾಪದ ಮೊದಲ ದಿನವೇ ಸದನದಲ್ಲಿ ಅನೇಕ ಸಚಿವರು, ಆಡಳಿತ ಹಾಗೂ ವಿಪಕ್ಷಗಳ ಅನೇಕ ಸದಸ್ಯರು ಸದನಕ್ಕೆ ಗೈರು ಹಾಜರಾಗಿದ್ದರು.
ಇನ್ನು ಅಧಿವೇಶ ಡಿಸೆಂಬರ್ 15ರ ವರೆಗೆ ನಡೆಯಬೇಕಿದ್ದು, ಇದೀಗ ಕೊರೊನಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ನಾಲ್ಕೇ ದಿನಕ್ಕೆ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ.