ಶ್ರೀನಗರ,ಡಿ. 08 (DaijiworldNews/HR): ಅರಣ್ಯ ಪ್ರದೇಶಗಳಿಂದ ಗುಜ್ಜರ್ ಸಮುದಾಯದ ಕೆಲವು ಕುಟುಂಬದವರನ್ನು ಅಧಿಕಾರಿಗಳು ಒಕ್ಕಲೆಬ್ಬಿಸಿದ್ದು ಆ ಕುಟುಂಬದವರಲ್ಲಿ ಮಾತುಕತೆ ನಡೆಸಲು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರರು ತೆರಳಿದ್ದು ಈ ವೇಳೆ ಜಮ್ಮು–ಕಾಶ್ಮೀರ ಪೊಲೀಸರು ಅವರನ್ನು ತಡೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೆಹಬೂಬಾ ಮುಫ್ತಿ, "ಗುಜ್ಜರ್ ಕುಟುಂಬದವರನ್ನು ಭೇಟಿಯಾಗಲು ನಾನು ತೆರಳಲು ಮುಂದಾಗಿದ್ದಾಗ ಪೊಲೀಸರು ನನ್ನ ನಿವಾಸದ ಬಳಿ ಬಂದು ಮುಖ್ಯ ಪ್ರವೇಶ ದ್ವಾರವನ್ನು ಬಂದ್ ಮಾಡಿದ್ದಾರೆ ಎಂದು ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ".
ಇನ್ನು ಭಾರತ ಸರ್ಕಾರದ ಪರವಾಗಿ ಅಕ್ರಮವಾಗಿ ವಶದಲ್ಲಿರಿಸುವುದು ಯಾವುದೇ ರೀತಿಯ ಪ್ರತಿರೋಧವನ್ನು ತಡೆಯುವ ಒಂದು ವಿಧಾನವಾಗಿ ಮಾರ್ಪಟ್ಟಿದೆ. ತಮ್ಮ ಮನೆಗಳಿಂದ ತೆರವುಗೊಂಡಿರುವ ಕುಟುಂಬದವರನ್ನು ಭೇಟಿ ಮಾಡುವ ಸಲುವಾಗಿ ನಾನು ಹೊರಟಿದ್ದೆ ಆದರೆ ನನ್ನನ್ನು ಗೃಹ ಬಂಧನದಲ್ಲಿಟ್ಟಿದ್ದಾರೆ ಎಂದರು.