ಇಂದೋರ್, ಡಿ. 08 (DaijiworldNews/HR): ಕೃಷಿ ಕಾಯ್ದೆಯನ್ನು ದೊಡ್ಡ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದ್ವಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನೋಟು ಬದಲಾವಣೆ ಮತ್ತು ಜಿಎಸ್ಟಿ ಅನುಷ್ಠಾನದ ನಂತರ ಮೋದಿ ಸರ್ಕಾರ, ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕೃಷಿ ಕ್ಷೇತ್ರಕ್ಕೆ ಅಪಾಯವಾಗುವಂತಹ ಕಾಯ್ದೆಗಳನ್ನು ಜಾರಿಗೆ ತಂದಿದೆ" ಎಂದರು.
ಇನ್ನು "ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ, ಈ ಸಮಸ್ಯೆಯನ್ನು ಬಗೆಹರಿಸಲು ಜಂಟಿ ಸದನ ಸಮಿತಿಯನ್ನು ರಚಿಸಬೇಕು. ರೈತರ ಮುಖಂಡರು ಮತ್ತು ಜಂಟಿ ಸದನ ಸಮಿತಿ ಸದಸ್ಯರೊಂದಿಗೆ ಪ್ರಧಾನಿಯವರು ಚರ್ಚಿಸಬೇಕು" ಎಂದು ಹೇಳಿದ್ದಾರೆ.