ಹೊಸದಿಲ್ಲಿ,ಡಿ. 08 (DaijiworldNews/HR): ಪೆಟ್ರೋಲ್ ದರ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಪೆಟ್ರೋಲ್ ದರ ಲೀಟರ್ ಗೆ ರೂ. 90 ಆಗಿರುವುದು ದೇಶದ ಜನರಿಗೆ ಸರ್ಕಾರ ಮಾಡುತ್ತಿರುವ ದೊಡ್ಡ ಶೋಷಣೆ. ಪೆಟ್ರೋಲ್ನ ಎಕ್ಸ್-ರಿಫೈನರಿ ದರ ಲೀಟರ್ ಗೆ ರೂ. 30 ಆಗಿದೆ. ಎಲ್ಲಾ ವಿಧದ ತೆರಿಗೆಗಳು ಹಾಗೂ ಪೆಟ್ರೋಲ್ ಪಂಪ್ ಕಮಿಷನ್ ಎಲ್ಲಾ ಸೇರಿ ಉಳಿದ ರೂ. 60 ವೆಚ್ಚ ಆಗುತ್ತದೆ. ನನ್ನ ಪ್ರಕಾರ ಪೆಟ್ರೋಲ್ ಗರಿಷ್ಠ ರೂ. 40 ಆಗಬೇಕು, ಎಂದರು,
ಇನ್ನು ದೇಶದಲ್ಲಿ ಇಂಧನ ಬೆಲೆಗಳಲ್ಲಾಗಿರುವ ವಿಪರೀತ ಏರಿಕೆಯಾಗುತ್ತಿದ್ದು, ಪೆಟ್ರೋಲ್ ದರ ಲೀಟರ್ ಗೆ ಗರಿಷ್ಠ ರೂ. 40 ಆಗಬೇಕು ಎಂದು ಹೇಳಿದ್ದಾರೆ.