ನವದೆಹಲಿ, ಡಿ.08 (DaijiworldNews/HR): 1975ರಲ್ಲಿ ಭಾರತದಲ್ಲಿ ವಿಧಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು 'ಅಸಾಂವಿಧಾನಿಕ' ಎಂದು ಘೋಷಿಸಬೇಕು ಜೊತೆಗೆ ತಮಗೆ 25 ಕೋಟಿ ಪರಿಹಾರ ನೀಡಬೇಕು ಎಂದು 94 ವರ್ಷದ ವೃದ್ಧೆಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
94 ವರ್ಷದ ವೃದ್ಧೆ ವೀಣಾ ಸರೀನ್ ಎಂಬುವರು ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಡಿಸೆಂಬರ್ 14 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಇನ್ನು 1975ರಲ್ಲಿ ಪೋಷಿಸಿದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನನ್ನ ಪತಿಯ ಒಡೆತನದ, ನವದೆಹಲಿಯ ಕರೋಲ್ ಬಾಗ್ ಮತ್ತು ಕನಾಟ್ ಪ್ಲೇಸ್ನಲ್ಲಿದ್ದ ಆಸ್ತಿಯನ್ನು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಅಧಿಕಾರಿಗಳು ಬಲವಂತವಾಗಿ ಮುಟ್ಟುಗೋಲು ಹಾಕಿಕೊಂಡಿದ್ದರು. ಆ ಸಮಯದಲ್ಲಿ ನಮಗೆ ಬೆದರಿಕೆ ಹಾಕಲಾಗಿತ್ತು ಎಂದು ವೃದ್ಧ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.