ಜಮ್ಮು,ಡಿ. 07 (DaijiworldNews/HR): ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಬಾಲಕಿಯರು ಭಾರತದ ಗಡಿಯೊಳಗೆ ಪ್ರವೇಶಿಸಿದ್ದು, ಅವರನ್ನು ಸೋಮವಾರ ಮರಳಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಪಾಕಿಸ್ತಾನದ ಕಹುಟಾ ತಹಸಿಲ್ ನಿವಾಸಿಗಳಾದ ಲೈಬಾ ಜಬೈರ್ (17) ಮತ್ತು ಆಕೆಯ ಸಹೋದರಿ ಸನಾ ಜಬೈರ್ (13) ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಮೂಲಕ ದೇಶವನ್ನು ಪ್ರವೇಶಿಸಿದ್ದರು.
ಇನ್ನು ಪಾಕಿಸ್ತಾನದ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಸಹೋದರಿಯರನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದ್ದು, ಸೌಹಾರ್ದ ಸಂಕೇತವಾಗಿ ಅವರಿಗೆ ಸೇನೆಯು ಉಡುಗೊರೆ ಮತ್ತು ಸಿಹಿ ತಿಂಡಿಗಳನ್ನು ನೀಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.