ಬೆಂಗಳೂರು,ಡಿ. 07 (DaijiworldNews/HR): ಜನರ ದಿಕ್ಕು ತಪ್ಪಿಸಲು ಲವ್ ಜಿಹಾದ್, ಗೋ ಹತ್ಯೆ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, "ಕರ್ನಾಟದಲ್ಲಿ ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಎಲ್ಲಾ ವಿಚಾರದಲ್ಲಿ ವಿಫಲವಾಗಿದ್ದು, ಗೋಹತ್ಯೆ ನಿಷೇಧ ಬದಲಾಗಿ ಗೋ ಮಾರಾಟ ನಿಷೇಧ ಕಾಯ್ದೆಯನ್ನು ಏಕೆ ಜಾರಿಗೆ ತರುವುದಿಲ್ಲ. ರೈತರು ವಯಸ್ಸಾದ ದನವನ್ನು ಮಾರಾಟ ಮಾಡುತ್ತಾರೆ, ಮನೆಯವರನ್ನು ನೋಡಿಕೊಂಡಂತೆ ಗೋವನ್ನು ನೋಡಿಕೊಳ್ಳಲಿ. ಸತ್ತಾಗ ಗೌರವಯುತ ಅಂತ್ಯಸಂಸ್ಕಾರ ನಡೆಸಲಿ ಎಂದರು".
ರಾಜ್ಯ ಸರ್ಕಾರಕ್ಕೆ ಗೋವಿನ ಬಗ್ಗೆ ಕಾಳಜಿ ಇದ್ದರೆ ಇಂತಹ ಕಾನೂನು ಜಾರಿಗೊಳಿಸಲಿ, ಗೋಹತ್ಯೆ ಕಾನೂನನ್ನು ಈ ಹಿಂದೆ ಇಂದಿರಾ ಗಾಂಧಿ ಕಾಲದಲ್ಲಿ ಜಾರಿಗೊಳಿಸಲಾಗಿದೆ. ಕೇರಳ, ಮಿಜೊರಾಂ ಗೋವಾದಲ್ಲಿ ಗೋ ತಿನ್ನಬಹುದು. ನಿಜವಾದ ಕಾಳಜಿ ಇವರಲ್ಲಿ ಇದ್ದರೆ ದೇಶದಾದ್ಯಂತ ಏಕೆ ಕಾಯ್ದೆ ಜಾರಿಗೆ ತರಲ್ಲ ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಮಾಜ ಹಾಗೂ ದೇಶಕ್ಕೆ ಮಾರಕವಾದ ಕಾನೂನು ವಿರುದ್ಧ ಯಾವಾಗಲೂ ನಮ್ಮ ಹೋರಾಟ ಎಂದು ಹೇಳಿದ್ದಾರೆ.