ನವದೆಹಲಿ, ಡಿ. 07 (DaijiworldNews/HR): ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಒಪ್ಪುವಂತದ್ದು, ಅದನ್ನು ನಾವು ಬೆಂಬಲಿಸುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾವು ಆರಂಭದಿಂದಲೂ ರೈತರ ಪರ ನಿಂತಿದ್ದು, ಅವರ ಪ್ರತಿಭಟನೆಯ ಆರಂಭದಲ್ಲಿ, 9 ಸ್ಟೇಡಿಯಂಗಳನ್ನು ಜೈಲುಗಳನ್ನಾಗಿ ಪರಿವರ್ತಿಸುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದರು, ನನ್ನ ಮೇಲೆ ಒತ್ತಡವಿದ್ದರೂ ನಾನದಕ್ಕೆ ಅನುಮತಿ ನೀಡಿಲ್ಲ" ಎಂದರು.
ಇನ್ನು "ನಮ್ಮ ಪಕ್ಷದ ಶಾಸಕರು, ನಾಯಕರು ರೈತರ ಸೇವಕರಾಗಿ ಸೇವೆ ಮಾಡುತ್ತಿದ್ದಾರೆ. ನಾನು ಈ ಪ್ರತಿಭಟನೆಗೆ ಮುಖ್ಯಮಂತ್ರಿಯಾಗಿ ಬಂದಿಲ್ಲ. ಸೇವಕನಾಗಿ ಬಂದಿದ್ದೇನೆ. ರೈತರು ಇಂದು ಸಂಕಷ್ಟದಲ್ಲಿದ್ದು, ನಾವು ಅವರ ಜತೆ ನಿಲ್ಲಬೇಕು ಎಂದು ಹೇಳಿದ್ದಾರೆ.