ಬೆಂಗಳೂರು, ಡಿ.07 (DaijiworldNews/HR):: ಪೆಟ್ರೋಲ್ ಹಾಗೂ ಡೀಸೆಲ್ ದರವು ಸತತ ಆರನೇ ದಿನವೂ ಏರಿಕೆಯಾಗಿದ್ದು, ಸೋಮವಾರ ಪೆಟ್ರೋಲ್ ದರ 30 ಪೈಸೆ ಹಾಗೂ ಡೀಸೆಲ್ ದರ 29 ಪೈಸೆಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 83.41ರಿಂದ 86.20ಕ್ಕೆ ಏರಿದೆ. ಇನ್ನು ಡೀಸೆಲ್ ದರ ನೋಡುವುದಾದರೆ 73.61ರಿಂದ 78.03ಕ್ಕೆ ಏರಿಕೆ ಕಂಡಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90ರ ಗಡಿ ದಾಟಿದ್ದರೆ, ಡೀಸೆಲ್ ದರ 80ರ ಗಡಿ ದಾಟಿದೆ.
ಇನ್ನು ತೈಲ ಕಂಪೆನಿಗಳು ನ.20ರಿಂದ ನಿತ್ಯ ದರ ಪರಿಷ್ಕರಣೆ ಪ್ರಾರಂಭ ಮಾಡಿದ ನಂತರ 14 ಬಾರಿ ತೈಲ ದರ ಏರಿಕೆಯಾಗಿದೆ. ಈ ಕಾರಣದಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಸೆಪ್ಟೆಂಬರ್ 2018ರಿಂದ ಈಚೆಗೆ ಏರಿಕೆಯಾಗುತ್ತಲೇ ಇದೆ. ಇನ್ನು 17 ದಿನಗಳಲ್ಲಿ ಪೆಟ್ರೋಲ್ ದರ 2.35 ಹಾಗೂ ಡೀಸೆಲ್ ದರ 3.15ಕ್ಕೆ ಹೆಚ್ಚಿದೆ.