ಹೊಸದಿಲ್ಲಿ, ಡಿ.07 (DaijiworldNews/HR): ನೂತನ ಸಂಸತ್ ಕಟ್ಟಡದ ಶಿಲಾನ್ಯಾಸ ನೇರವೇರಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಸೆಂಟ್ರಲ್ ವಿಸ್ಟಾ ಪ್ರೊಜೆಕ್ಟ್ನ್ನು ವಿರೋಧಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣವಾಗುವವರೆಗೂ ಕಟ್ಟಡದ ಧ್ವಂಸ ಅಥವಾ ನಿರ್ಮಾಣ ಕಾರ್ಯವನ್ನು ಮಾಡುವಂತಿಲ್ಲ ಎಂದು ಆದೇಶ ನೀಡಿದೆ.
ಜಸ್ಟಿಸ್ ಎಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠವು ಕೇಂದ್ರ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸತ್ ಕಟ್ಟಡ ನಿರ್ಮಾಣ ವಿಚಾರದಲ್ಲಿ ಆಕ್ರಮಣಕಾರಿಯಾಗಿ ಮುಂದುವರಿಯುತ್ತೀರಿ ಎಂದು ನಾವು ಯೋಚಿಸಿರಲಿಲ್ಲ ಎಂದು ಹೇಳಿದೆ.
ಇನ್ನು ಕಟ್ಟಡ ನಿರ್ಮಾಣ, ದ್ವಂಸ ಇಲ್ಲವೇ ಮರಗಳನ್ನು ಕಡಿಯಲಾಗುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟ್ಗೆ ಭರವಸೆ ನೀಡಿದ್ದು, ಇದೀಗ ಡಿ.10ರಂದು ಹಮ್ಮಿಕೊಳ್ಳಲಾಗಿದ್ದ ಸಂಸತ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಗ್ರೀನ್ ಸಿಗ್ನಲ್ ನೀಡಿದೆ.