ಮುಂಬೈ, ಡಿ.07 (DaijiworldNews/MB) : ಕೊರೊನಾ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಮುಂಬೈನಲ್ಲಿ ನಿಧನರಾದರು.
34 ವರ್ಷ ಪ್ರಾಯವಾಗಿದ್ದ ಅವರನ್ನು ಕಳೆದ ವಾರ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದರು.
ರಾತ್ರಿ 2 ಗಂಟೆಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು 3 ಗಂಟೆಗೆ ದಿವ್ಯಾರವರು ನಿಧನರಾದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಿವ್ಯಾ ಅವರ ಸ್ನೇಹಿತ ಯುವರಾಜ್ ರಘುವಂಶಿ ಅವರು, ''ನನ್ನ ಕುಟುಂಬಕ್ಕೆ ಹಾಗೂ ನನಗೆ ಇದು ದೊಡ್ಡ ಆಘಾತ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಹೇಳಿದ್ದಾರೆ.