ಶ್ರೀನಗರ, ಡಿ.07 (DaijiworldNews/HR): ನಾಲ್ಕನೇ ಹಂತದ ಜಿಲ್ಲಾ ಅಭಿವೃದ್ಧಿ ಮಂಡಳಿಗೆ (ಡಿಡಿಸಿ) ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಸೋಮವಾರ ಆರಂಭವಾಗಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ತಲಾ 17 ವಿಭಾಗಗಳಲ್ಲಿನ 34 ಸ್ಥಾನಗಳಿಗಾಗಿ ಮತದಾನ ನಡೆಯುತ್ತಿದೆ.
ಕಾಶ್ಮೀರದಲ್ಲಿ 48 ಮಹಿಳೆಯರು ಸೇರಿದಂತೆ ಒಟ್ಟು 138 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಜಮ್ಮುವಿನಲ್ಲಿ 34 ಮಹಿಳೆಯರು ಸೇರಿ ಒಟ್ಟು 111 ಅಭ್ಯರ್ಥಿಗಳು ಕಣದಲ್ಲಿದ್ದಾರೆಂದು ತಿಳಿದು ಬಂದಿದೆ.
ಇನ್ನು ನಾಲ್ಕನೇ ಹಂತದ ಮತದಾನಕ್ಕೆ ಒಟ್ಟು 1,910 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಜಮ್ಮುವಿನಲ್ಲಿ 781 ಮತ್ತು ಕಾಶ್ಮೀರದಲ್ಲಿ 1129 ಮತಗಟ್ಟೆಗಳಿವೆ ಎಂದು ವರದಿಯಾಗಿದೆ.