ನವದೆಹಲಿ, ಡಿ.07 (DaijiworldNews/HR): ದಾಳಿಗೆ ಸಂಚು ರೂಪಿಸಿದ್ದ ಐವರು ಭಯೋತ್ಪಾದಕರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸುವ ಮೂಲಕ ಭಾರೀ ದಾಳಿಯ ಸಂಚನ್ನು ವಿಫಲಗೊಳಿಸಿದ್ದಾರೆಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಐವರು ಉಗ್ರರನ್ನು ದೆಹಲಿಯ ಶಕರ್ಪುರ್ ಪ್ರದೇಶದಲ್ಲಿ ಗುಂಡಿನ ಚಕಮಕಿಯ ಬಳಿಕ ಬಂಧಿಸಲಾಗಿದೆ ಎಂದು ಸ್ಪೆಷಲ್ ಸೆಲ್ ಡಿಸಿಪಿ ಪ್ರಮೋದ್ ಕುಶ್ವಾಹಾ ತಿಳಿಸಿದ್ದಾರೆ.
ಇನ್ನು ಮೂವರು ಉಗ್ರರು ಜಮ್ಮು-ಕಾಶ್ಮೀರ ಮೂಲದವರಾಗಿದ್ದು, ಇಬ್ಬರು ಪಂಜಾಬ್ ರಾಜ್ಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.
ಉಗ್ರರನ್ನು ಬಂಧಿಸಲು ಸ್ಪೆಷಲ್ ಸೆಲ್ ಅಧಿಕಾರಿಗಳು ತೆರಳಿದ್ದ ವೇಳೆ ಗುಂಡಿನ ದಾಳಿ ನಡೆದಿದ್ದು, ಬಳಿಕ ಐವರು ಶಂಕಿತ ಉಗ್ರರನ್ನು ಬಂಧಿಸಿ, ಅವರ ಬಳಿ ಇದ್ದ ಶಸ್ತ್ರಾಸ್ತ್ರ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.