ಮುಂಬೈ, ಡಿ.07 (DaijiworldNews/MB) : ಬಾಲಿವುಡ್ ನಟ ವರುಣ್ ಧವನ್ಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ತಿಳಿದು ಬಂದಿದೆ.
ಅವರು ರಾಜ್ ಮೆಹ್ತಾ ನಿರ್ಮಾಣದ 'ಜಗ್ ಜಗ್ ಜೀಯೋ' ಚಿತ್ರದ ಶೂಟಿಂಗ್ಗಾಗಿ ಚಂಡೀಗಢಕ್ಕೆ ತೆರಳಿದ್ದರು.
ಗ್ರೂಪ್ ವಿಡಿಯೋ ಕರೆ ಮೂಲಕ ತನ್ನ ಸ್ನೇಹಿತರೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವರುಣ್ ಧವನ್ ಈ ಮಾಹಿತಿಯನ್ನು ನೀಡಿದ್ದಾರೆ.
''ನಾನು ಈ ಸಾಂಕ್ರಾಮಿಕ ಯುಗದಲ್ಲಿ ಕೆಲಸಕ್ಕೆ ಮರಳುತ್ತಿದ್ದಂತೆ ಕೊರೊನಾ ದೃಢಪಟ್ಟಿದೆ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಜೀವನದಲ್ಲಿ ಏನೂ ಹೇಳಲಾಗದು. ವಿಶೇಷವಾಗಿ ಕೊರೊನಾದ ಬಗ್ಗೆ ಹೇಳಲಾಗದು. ಆದ್ದರಿಂದ ದಯವಿಟ್ಟು ಹೆಚ್ಚು ಜಾಗರೂಕರಾಗಿರಿ. ನಾನು ಜಾಗರೂಕರಾಗಿರಬಹುದಿತ್ತು ಎಂದು ನಾನು ನಂಬುತ್ತೇನೆ. ಶೀಘ್ರದಲ್ಲಿಯೇ ಗುಣಮುಖನಾಗುತ್ತೇನೆ'' ಎಂದು ತಿಳಿಸಿದ್ದಾರೆ.