ನವದೆಹಲಿ, ಡಿ.07 (DaijiworldNews/MB) : ಅಮೇರಿಕಾದ ಫಾರ್ಮಾ ಕಂಪೆನಿ ಫೈಝರ್ ಕೊರೊನಾ ಸೋಂಕು ಲಸಿಕೆಯ ತುರ್ತು ಬಳಕೆಯ ಅಧಿಕಾರ ಪಡೆಯಲು ಭಾರತೀಯ ಪ್ರಧಾನ ಔಷಧ ನಿಯಂತ್ರಕದ (ಡಿಸಿಜಿಐ) ಸಮ್ಮತಿ ಕೋರಿದ ಬೆನ್ನಲ್ಲೇ ಈಗ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ), ಕೋವಿಶೀಲ್ಡ್ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ನೀಡುವಂತೆ ಡಿಸಿಜಿಐ ಇಲಾಖೆಗೆ ಮನವಿ ಮಾಡಿದೆ ಎಂದು ವರದಿಯಾಗಿದೆ.
ಪುಣೆಯ ಎಸ್ಐಐಯು ಡಿಸಿಜಿಐ ಬಳಿ ಅನುಮತಿ ಕೋರಿರುವ ಭಾರತದ ಮೊದಲ ಸಂಸ್ಥೆ ಎಂಬ ಹಿರಿಮೆಯನ್ನು ಪಡೆದಿದೆ.
ವೈದ್ಯಕೀಯ ಅಗತ್ಯತೆ ಹಾಗೂ ದೇಶದ ಜನರ ಹಿತಾಸಕ್ತಿಯ ನಿಟ್ಟಿನಲ್ಲಿ ಈ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡಬೇಕು ಎಂದು ಡಿಸಿಜಿಐಗೆ ಎಸ್ಐಐ ಸಂಸ್ಥೆಯು ಮನವಿ ಮಾಡಿದೆ ಎನ್ನಲಾಗಿದೆ.
ಇನ್ನು ಫೈಝರ್ ಕಂಪೆನಿಯ ಕೊರೊನಾ ಸೋಂಕು ಲಸಿಕೆಯ ತುರ್ತು ಬಳಕೆಗೆ ಈಗಾಗಲೇ ಬ್ರಿಟನ್ ಹಾಗೂ ಬಹರೇನ್ ಸಮ್ಮತಿಸಿದೆ.