ಹೊಸದಿಲ್ಲಿ, ಡಿ.07 (DaijiworldNews/HR): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಯನ್ನು ಕೇಂದ್ರ ತಕ್ಷಣ ರದ್ದುಗೊಳಿಸಬೇಕೆಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ರಂಜನ್ ಚೌಧರಿ "ಕೃಷಿ ಕಾಯ್ದೆ ರದ್ದು ಮಾಡುವುದನ್ನು ಪ್ರತಿಷ್ಠೆಯ ವಿಷಯವಾಗಿಸಬೇಡಿ. ಈ ಕಾಯ್ದೆಗಳು ರೈತ ವಿರೋಧಿ ಮತ್ತು ಕಾರ್ಪೊರೇಟ್ ಸ್ನೇಹಿಯಾಗಿದ್ದು ರೈತರುಗಳಿಗೆ ಇದರಿಂದ ತೊಂದರೆಯಾಗುತ್ತಿದೆ" ಎಂದು ತಿಳಿಸಿದ್ದಾರೆ.
ಇನ್ನು "ಕೃಷಿ ಕಾಯ್ದೆಯನ್ನು ನಿಷೇಧಿಸುವುದು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಬೇಡಿ, ಜನರ ಬಯಕೆ ಮತ್ತು ಆಕಾಂಕ್ಷೆಗಳಿಗೆ ಸರ್ಕಾರ ಸ್ಪಂದಿಸಿ ಕೃಷಿ ಕಾನೂನು ರದ್ದು ಮಾಡಬೇಕು. ಇದರಿಂದಾಗಿ ಲಕ್ಷಾಂತರ ರೈತರ ಜೀವನಾಧಾರ ಅಪಾಯದಲ್ಲಿದೆ" ಎಂದು ಹೇಳಿದ್ದಾರೆ.