ಜೈಪುರ, ಡಿ.07 (DaijiworldNews/MB) : ವಧುವಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆ ಜೋಡಿಯೊಂದು ಪಿಪಿಇ ಕಿಟ್ ಧರಿಸಿ ವಿವಾಹವಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ವಿವಾಹದ ದಿನವೇ ವಧುವಿಗೆ ಕೊರೊನಾ ಪಾಸಿಟಿವ್ ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ರಾಜಸ್ಥಾನದ ಬಾರಾ ಜಿಲ್ಲೆಯ ಶಹಬಾದ್ನ ಕೆಲ್ವಾರಾ ಕೊರೊನಾ ಕೇಂದ್ರದಲ್ಲಿಯೇ ಜೋಡಿಯು ವಿವಾಹವಾಗಿದ್ದು ಈ ವೇಳೆ ಪಿಪಿಇ ಕಿಟ್ ಧರಿಸಿದ್ದಾರೆ.
ವಿವಾಹದ ವೇಳೆ ಎಲ್ಲಾ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ. ಎಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅನೇಕ ಹಿರಿಯ ಅಧಿಕಾರಿಗಳು ಹಾಜರಿದ್ದು ಪರಿಶೀಲನೆ ನಡೆಸಿದ್ದಾರೆ.