ಮುಂಬೈ, ಡಿ.06 (DaijiworldNews/PY): ಕೇಂದ್ರ ಸರ್ಕಾರವು ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಷ್ಟ್ರವ್ಯಾಪಿ ರೈತರು ಬೀದಿಗಿಳಿದು ನಡೆಸುತ್ತಿರುವ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆದರೆ, ದೇಶದಲ್ಲಿ ಈ ರೀತಿಯಾಗಿ ನಡೆಯುತ್ತಿಲ್ಲ" ಎಂದರು.
"ನೂತನ ಕೃಷಿ ಕಾನೂನುಗಳ ವಿರುದ್ದ ಸಾವಿರಾರು ರೈತರು ಒಂದು ವಾರಗಳಿಂದ ದೆಹಲಿಯ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ, ಡಿ.8ಕ್ಕೆ ಭಾರತ್ ಬಂದ್ಗೆ ಕೂಡಾ ಕರೆ ನೀಡಿದ್ದಾರೆ" ಎಂದು ತಿಳಿಸಿದರು.
"ಸರ್ಕಾರದ ಮೇಲೆ ಬುದ್ಧಿವಂತಿಯು ಬೆಳಕು ಚೆಲ್ಲುತ್ತದೆ. ಹಾಗೂ ಸಮಸ್ಯೆಗಳನ್ನು ನಿವಾರಿಸಲು ಅರಿವಿನ ಅಗತ್ಯವೂ ಇದೆ. ದೆಹಲಿಗೆ ಮಾತ್ರ ರೈತರ ಪ್ರತಿಭಟನೆ ಸೀಮಿತವಾಗಿಲ್ಲ" ಎಂದರು.
"ಈ ರಾಜ್ಯಗಳ ರೈತರು ದೇಶದ ರೈತರ ಹೊಟ್ಟೆ ತುಂಬಿಸುವುದರೊಂದಿಗೆ 12ಕ್ಕಿಂತ ಅಧಿಕ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಪೂರೈಸಿದ್ದಾರೆ" ಎಂದು ಹೇಳಿದರು.