ನವದೆಹಲಿ, ಡಿ.06 (DaijiworldNews/PY): "ಕೇಂದ್ರ ಸರ್ಕಾರದ ಹೊಸ ಕಾಯ್ದೆಗಳನ್ನು ಶೀಘ್ರವೇ ರದ್ದು ಮಾಡದಿದ್ದಲ್ಲಿ ಖೇಲ್ ರತ್ನ ಪ್ರಶಸ್ತಿ ಪುನಃ ನೀಡುತ್ತೇನೆ" ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದರು.
ಕಳೆದ 11 ದಿನಗಳಿಂದ ಹರಿಯಾಣ ಹಾಗೂ ದೆಹಲಿ ಗಡಿಯ ಸಿಂಗುವಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಮಾತನಾಡಿದ ಅವರು, "ಕೇಂದ್ರ ಸರ್ಕಾರವು ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳದಿದ್ದಲ್ಲಿ, ಖೇಲ್ ರತ್ನ ಪ್ರಶಸ್ತಿಯನ್ನು ವಾಪಸ್ ನೀಡುತ್ತೇನೆ. ಈ ಕೃಷಿ ಕಾನೂನುಗಳು ಜಾರಿಗೆ ಬರುವ ಮುನ್ನ ರೈತರ ಐಕ್ಯತೆ ಎಂದಿಗೂ ಇರುತ್ತದೆ" ಎಂದಿದ್ದಾರೆ.
ಇನ್ನು ಮಾಜಿ ರಾಷ್ಟ್ರೀಯ ಬಾಕ್ಸಿಂಗ್ ತರಬೇತುದಾರ ಗುರ್ಬಾಕ್ಷ್ ಸಿಂಗ್ ಸಂಧು ಅವರೂ ಕೂಡಾ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು, ದ್ರೋಣಾಚಾರ್ಯ ಪ್ರಶಸ್ತಿಯನ್ನು ವಾಪಾಸ್ಸು ನೀಡಲು ತೀರ್ಮಾನಿಸಿದ್ದಾರೆ.