ಬೆಂಗಳೂರು, ಡಿ.06 (DaijiworldNews/PY): ಪೆಟ್ರೋಲ್ ಹಾಗೂ ಡೀಸೆಲ್ ದರವು ಸತತ ಐದನೇ ಬಾರಿಗೆ ಏರಿಕೆಯಾಗಿದ್ದು, ರವಿವಾರ ಪೆಟ್ರೋಲ್ ದರ 28 ಪೈಸೆ ಹಾಗೂ ಡೀಸೆಲ್ ದರ 29 ಪೈಸೆಗೆ ಏರಿಕೆಯಾಗಿದೆ.
ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 83.13 ರಿಂದ 83.41ಕ್ಕೆ ಏರಿದೆ. ಇನ್ನು ಡೀಸೆಲ್ ದರ ನೋಡುವುದಾದರೆ 73.32ರಿಂದ 73.61ಕ್ಕೆ ಏರಿಕೆ ಕಂಡಿದೆ. ಮುಂಬೈನಲ್ಲಿ ಪೆಟ್ರೋಲ್ ದರ 90ರ ಗಡಿ ದಾಟಿದ್ದರೆ, ಡೀಸೆಲ್ ದರ 80ರ ಗಟಡಿ ದಾಟಿದೆ.
ತೈಲ ಕಂಪೆನಿಗಳು ನ.20ರಿಂದ ನಿತ್ಯ ದರ ಪರಿಷ್ಕರಣೆ ಪ್ರಾರಂಭ ಮಾಡಿದ ನಂತರ 14 ಬಾರಿ ತೈಲ ದರ ಏರಿಕೆಯಾಗಿದೆ. ಈ ಕಾರಣದಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಸೆಪ್ಟೆಂಬರ್ 2018ರಿಂದ ಈಚೆಗೆ ಏರಿಕೆಯಾಗುತ್ತಲೇ ಇದೆ. ಇನ್ನು 17 ದಿನಗಳಲ್ಲಿ ಪೆಟ್ರೋಲ್ ದರ 2.35 ಹಾಗೂ ಡೀಸೆಲ್ ದರ 3.15ಕ್ಕೆ ಹೆಚ್ಚಿದೆ.
ಕೊರೊನಾ ಲಸಿಕೆಯ ಬೇಡಿಕೆ ಅಧಿಕವಾಗುವ ಭರವಸೆಯ ಕಾರಣ ಬ್ರೆಂಟ್ ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದೆ.