ಜಮ್ಮು ಕಾಶ್ಮೀರ, ಡಿ. 06 (DaijiworldNews/HR): ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಅಪ್ರಾಪ್ತ ಬಾಲಕಿಯರು ಆಕಸ್ಮಿಕವಾಗಿ ಗಡಿ ದಾಟಿ ಬಂದಿದ್ದು, ಅವರನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.
ಸಾಂಧರ್ಭಿಕ ಚಿತ್ರ
ಇಬ್ಬರು ಬಾಲಕಿಯರು ಜಮ್ಮು ಕಾಶ್ಮೀರದ ಪೂಂಚ್ ಗಡಿ ನಿಯಂತ್ರಣ ರೇಖೆಯ ಬಳಿಯಿಂದ ಇಂದು ಮುಂಜಾನೆ ಭಾರತದ ಕಡೆಗೆ ಪ್ರವೇಶಿಸಿದ್ದು, ಅವರನ್ನು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಸಮೀಪದ ಕಹುತಾ ತೆಹ್ಸಿಲ್ ಅಬ್ಬಾಸ್ ಪುರ್ ಗ್ರಾಮದ ಲೈಬಾ ಜಬೈರ್( 17 ) ಮತ್ತು ಸನಾ ಜಬೈರ್ (13) ಎಂದು ಗುರುತಿಸಲಾಗಿದೆ.
ಬಾಲಕಿಯರು ಗಡಿ ನಿಯತ್ರಣ ರೇಖೆ ದಾಟಿದ್ದನ್ನು ಗಮನಿಸಿಸಿದ ಭಾರತೀಯ ಸೇನೆಯ ಯೋಧರು ಅವರನ್ನು ವಶಕ್ಕೆ ಪಡೆದಿದ್ದು, ಇದೀಗ ಬಾಲಕಿಯರನ್ನು ಪಾಕ್ಗೆ ಹಸ್ತಾಂತರಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.