ವಿಶಾಖಪಟ್ಟಣ,ಡಿ. 06 (DaijiworldNews/HR): 12 ನಕ್ಸಲರು ಆಂಧ್ರ ಪ್ರದೇಶ ಪೊಲೀಸರಿಗೆ ಶರಣಾದ ಘಟನೆ ವಿಶಾಖಪಟ್ಟಣದ ಚಿಂಟಪಲ್ಲಿ ಪ್ರದೇಶದಲ್ಲಿ ನಡೆದಿದೆ.
ಚಿಂಟಪಲ್ಲಿ ನಕ್ಸಲರು ಎಎಸ್ಪಿ ವಿದ್ಯಾ ಸಾಗರ್ ನಾಯ್ಡು ಅವರ ಸಮ್ಮುಖದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಈ ನಕ್ಸಲರೆಲ್ಲರು ಗಾಲಿಕೊಂಡ, ಪನಸಲಬಂದ, ಅಕುಲೂರು ಮತ್ತು ರಾಮಗಡ್ಡ ಗ್ರಾಮಗಳಿಗೆ ಸೇರಿದವರು ಎನ್ನಲಾಗಿದೆ.
ಇನ್ನು ಜನರನ್ನು ಮಾಹಿತಿದಾರರೆಂದು ಶಂಕಿಸುವುದು ಮತ್ತು ಊಹಾಪೋಹಗಳ ಆಧಾರದ ಮೇಲೆ ಜನರನ್ನು ಹತ್ಯೆ ಮಾಡುವ ಅನಾಗರಿಕ ಕೃತ್ಯಗಳಿಂದ ಇವರು ಬೇಸರಗೊಂಡಿದ್ದರು ಎಂದು ಶರಣಾದವರ ಕುರಿತು ವಿದ್ಯಾ ಸಾಗರ್ ನಾಯ್ಡು ಮಾಹಿತಿ ನೀಡಿದ್ದಾರೆ.