ನವದೆಹಲಿ, ಡಿ.06 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಡಿಸೆಂಬರ್ 8ಕ್ಕೆ ಭಾರತ್ ಬಂದ್ಗೆ ಕರೆ ನೀಡಿದ್ದು ಇದಕ್ಕೆ ಕಾಂಗ್ರೆಸ್ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ ಬೆಂಬಲ ವ್ಯಕ್ತಪಡಿಸಿವೆ.
ಈ ಬಗ್ಗೆ ಮಾಧ್ಯಮಕ್ಕೆ ತಿಳಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರ್, ''ಡಿಸೆಂಬರ್ 8 ರಂದು ನಮ್ಮ ಪಕ್ಷದ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಲಾಗುವುದು. ಇದು ರೈತರಿಗೆ ರಾಹುಲ್ ಗಾಂಧಿಯವರು ನೀಡಿದ ಬೆಂಬಲಕ್ಕೆ ನೀಡುವ ಬಲ'' ಎಂದು ಹೇಳಿದ್ದಾರೆ.
ಇನ್ನು ಟಿಆರ್ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು, ''ಟಿಆರ್ಎಸ್ ಕೂಡಾ ಭಾರತ್ ಬಂದ್ಗೆ ಬೆಂಬಲ ನೀಡುತ್ತದೆ. ಬಂದ್ನ ಯಶಸ್ವಿಗಾಗಿ ಪಕ್ಷವು ಸಕ್ರಿಯವಾಗಿ ಬಂದ್ನಲ್ಲಿ ಭಾಗಿಯಾಗಲಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಕಾರ್ಯಾಲಯವು ಕಾನೂನು ರೀತಿಯ ಹೋರಾಟಕ್ಕೆ ನಮ್ಮ ಸರ್ಕಾರ ಬೆಂಬಲವಿದೆ'' ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಕೃಷಿ ಕಾಯ್ದೆಗಳನ್ನು ಖಂಡಿಸಿ ದೆಹಲಿಯಲ್ಲಿ 11 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದೆ. 10 ನೇ ದಿನವಾದ ಶನಿವಾರ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ಐದನೇ ಸುತ್ತಿನ ಮಾತುಕತೆ ನಡೆದಿದೆ. ಈ ಮಾತುಕತೆ ವಿಫಲವಾಗಿದೆ. ಹಾಗೆಯೇ ಈ ಮಾತುಕತೆ ಸಂದರ್ಭ ರೈತರು ಮೌನ ಪ್ರತಿಭಟನೆ ನಡೆಸಿದ್ದಾರೆ. ಇನ್ನು ರೈತರು ಡಿ.8 ಕ್ಕೆ ಬಂದ್ ನಡೆಸಲಿದ್ದು ಮುಂದಿನ ಸುತ್ತಿನ ಮಾತುಕತೆ 9 ರಂದು ನಡೆಯಲಿದೆ.