ನವದೆಹಲಿ, ಡಿ.06 (DaijiworldNews/MB) : ಅಮೇರಿಕಾದ ಫಾರ್ಮಾ ಕಂಪೆನಿ ಫೈಝರ್ ಕೊರೊನಾ ಸೋಂಕು ಲಸಿಕೆಯ ತುರ್ತು ಬಳಕೆಯ ಅಧಿಕಾರ ಪಡೆಯಲು ಭಾರತದ ಔಷಧ ನಿಯಂತ್ರಕ ಡ್ರಗ್ಸ್ ಕಂಟ್ರೋಲ್ ಆಫ್ ಇಂಡಿಯಾದ(ಡಿಸಿಜಿಐ) ಸಮ್ಮತಿ ಕೋರಿದೆ ಎಂದು ವರದಿಯಾಗಿದೆ.
ಜರ್ಮನಿಯ ಕಂಪೆನಿ ಬಯೋಎನ್ಟೆಕ್ ಸಹಯೋಗದೊಂದಿಗೆ ಫೈಝರ್ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯನ್ನು ಬಳಸಲು ಮೊದಲು ಬ್ರಿಟನ್ ಒಪ್ಪಿಗೆ ಸೂಚಿಸಿದ್ದು ಆ ಬಳಿಕ ಬಹರೇನ್ ಸಮ್ಮತಿಸಿದೆ. ಈಗ ಈ ಕಂಪೆನಿಯು ಭಾರತದ ಅನುಮತಿಗಾಗಿ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 4 ರಂದು ಫೈಝರ್ ಇಂಡಿಯಾ ಅರ್ಜಿಯನ್ನು ಸಲ್ಲಿಸಿದ್ದು ದೇಶದಲ್ಲಿ ಮಾರಾಟ ಹಾಗೂ ವಿತರಣೆಗಾಗಿ ಲಸಿಕೆಯನ್ನು ಆಮದುಮಾಡಿಕೊಳ್ಳಲು ಅನುಮೋದನೆ ಕೋರಿದೆ.