ಔರಂಗಾಬಾದ್,ಡಿ. 06 (DaijiworldNews/HR): ಮಹಾರಾಷ್ಟ್ರದ ಬಸ್ ನಿರ್ವಾಹಕರು ಮತ್ತು ಟಿಕೆಟ್ ಇನ್ಸ್ಪೆಕ್ಟರ್ಗಳು ಇನ್ನು ಮುಂದೆ ತಮ್ಮ ಸಮವಸ್ತ್ರದಲ್ಲಿ ಕ್ಯಾಮೆರಾಗಳನ್ನು ಶೀಘ್ರದಲ್ಲಿ ಧರಿಸಲಿದ್ದು, ಅದರಿಂದ ಸಾರಿಗೆ ಸಮಯದಲ್ಲಿ ಪ್ರಯಾಣಿಕರ ವರ್ತನೆ ಮತ್ತು ಇತರ ಚಟುವಟಿಕೆಗಳನ್ನು ಗಮನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಕೆಲವು ನಿರ್ವಾಹಕಿಯರು ಕರ್ತವ್ಯದಲ್ಲಿದ್ದ ಕೆಲವು ಪ್ರಯಾಣಿಕರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ದೂರು ಸಲ್ಲಿಸಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ.
ಔರಂಗಾಬಾದ್ ಸ್ಮಾರ್ಟ್ ಸಿಟಿ ಅಭಿವೃದ್ಧಿ ನಿಗಮವು ಬಸ್ ನಿರ್ವಾಹಕರು ಮತ್ತು ಟಿಕೆಟ್ ಇನ್ಸ್ಪೆಕ್ಟರ್ಗಳ ಅಂಗಿಯ ಮುಂದಿನ ಜೇಬಿನಲ್ಲಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದ್ದು, ಇದು ಬಸ್ನಲ್ಲಿ ನಡೆಯುವ ಚಟುವಟಿಕೆಗಳನ್ನು ದಾಖಲಿಸಲಿದೆ ಎಂದು ತಿಳಿದು ಬಂದಿದೆ.