ಬೆಂಗಳೂರು, ಡಿ.06 (DaijiworldNews/MB) : ಕೊರೊನಾ ಸೋಂಕು ಹರಡುವಿಕೆ ಕಾರಣದಿಂದಾಗಿ ಹೊಸ ವರ್ಷದ ಮುಂಚಿನ ದಿನದಿಂದ ಕೆಲವು ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಡಿಸೆಂಬರ್ 31 ಮತ್ತು ಜನವರಿ 1 ರಂದು ಎರಡು ದಿನಗಳ ಕಾಲ ಮದ್ಯದಂಗಡಿಗಳನ್ನು ಮುಚ್ಚುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.
ಕೊರೊನಾ ಸೋಂಕಿನ ಎರಡನೇ ಅಲೆಯು ಮುಂದಿನ 48 ದಿನಗಳವರೆಗೆ ರಾಜ್ಯದಲ್ಲಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ವರದಿ ಪ್ರಕಾರ, ಸೋಂಕಿನ ಎರಡನೇ ಅಲೆಯು 45 ರಿಂದ 90 ದಿನಗಳ ನಡುವೆ ನಿರೀಕ್ಷಿಸಲಾಗಿದೆ.
ಸಲಹಾ ಸಮಿತಿಯು ರಾಜ್ಯವೂ ಎರಡನೇ ಕೊರೊನಾ ಅಲೆಯ ಪ್ರಭಾವಕ್ಕೆ ಒಳಗಾಗಬಹುದು ಎಂದು ವರದಿ ಮಾಡಿದೆ.
ಪ್ರಸ್ತುತ ವಿವಾಹ ಕಾರ್ಯಕ್ರಮಗಳಿಗೆ 100, ರಾಜಕೀಯ ಮತ್ತು ಧಾರ್ಮಿಕ ಕಾರ್ಯಗಳಿಗೆ 200 ಮತ್ತು ಅಂತ್ಯಕ್ರಿಯೆಯ ಸಂದರ್ಭದಲ್ಲಿ 50 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಿದೆ.
ಇನ್ನು ಈ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮದ್ಯದಂಗಡಿಗಳಲ್ಲಿ ಅಧಿಕ ಮಂದಿ ಸೇರುವ ಸಾಧ್ಯತೆಯಿರುವುದರಿಂದ ಬಾರ್, ವೈನ್ ಶಾಪ್ಗಳನ್ನು ಮುಚ್ಚಲು ಸರ್ಕಾರ ಚಿಂತನೆ ನಡೆಸಿದೆ.
ಕೊರೊನಾ ಹರಡುವುದನ್ನು ನಿಯಂತ್ರಿಸುವ ಕ್ರಮವಾಗಿ ಸರ್ಕಾರ ಲಾಕ್ಡೌನ್ ವಿಧಿಸಿತ್ತು. ಈ ಕಾರಣದಿಂದ ಸರ್ಕಾರಕ್ಕೆ 4,000 ಕೋಟಿ ರೂ. ತೆರಿಗೆ ನಷ್ಟವಾಗಿತ್ತು. ಹೊಸ ವರ್ಷದಲ್ಲಿ ಅಂಗಡಿಗಳನ್ನು ಮುಚ್ಚಿದರೆ, ಒಂದು ಸಾವಿರ ಕೋಟಿ ನಷ್ಟವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.