ಲಕ್ನೋ, ಡಿ.06 (DaijiworldNews/MB) : ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಎರಡು ಸ್ಥಾನಗಳನ್ನು ಕಳೆದುಕೊಂಡಿದೆ.
ಒಂದು ಶಿಕ್ಷಕರಿಗೆ ಮತ್ತು ಇನ್ನೊಂದು ಪದವೀಧರರಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ.
ತಮ್ಮ ಪಕ್ಷದ ಕಾರ್ಯಕರ್ತ ಲಾಲ್ ಬಿಹಾರಿ ಯಾದವ್ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದ ಒಂದು ದಿನದ ನಂತರ ಸಮಾಜವಾದಿ ಪಕ್ಷದ ಅಶುತೋಷ್ ಸಿನ್ಹಾ ವಾರಣಾಸಿ ಪದವೀಧರರ ಸ್ಥಾನವನ್ನು ಗೆದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಾರಣಾಸಿ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸಮಾಜವಾದಿ ಪಕ್ಷದ ಅಭ್ಯರ್ಥಿ ಲಾಲ್ ಬಿಹಾರಿ ಯಾದವ್, "ಇದು ಪಕ್ಷಕ್ಕೆ ದೊಡ್ಡ ಜಯವಾಗಿದೆ, ಫಲಿತಾಂಶದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿದರು.
11 ಸ್ಥಾನಗಳಲ್ಲಿ ಬಿಜೆಪಿ ನಾಲ್ಕು, ಸಮಾಜವಾದಿ ಪಕ್ಷ ಮೂರು ಮತ್ತು ಸ್ವತಂತ್ರ ಅಭ್ಯರ್ಥಿಗಳು ಎರಡು ಸ್ಥಾನಗಳನ್ನು ಗೆದ್ದಿದ್ದಾರೆ. ಇನ್ನೂ ಎರಡು ಸ್ಥಾನಗಳ ಫಲಿತಾಂಶ ಬಾಕಿ ಇದೆ.
ಆಡಳಿತ ಪಕ್ಷವಾದ ಬಿಜೆಪಿಯ ಭದ್ರಕೋಟೆಯಲ್ಲಿ ಸಮಾಜವಾದಿ ಪಕ್ಷದ ಗೆಲುವು ಅನೇಕರನ್ನು ಆಶ್ಚರ್ಯಗೊಳಿಸಿದೆ.
ವಿಧಾನಸಭೆ ಅಥವಾ ವಿಧಾನ ಪರಿಷತ್ ಎಂಬ ಎರಡು ಸದನಗಳನ್ನು ಹೊಂದಿರುವ ದ್ವಿಪಕ್ಷೀಯ ಶಾಸಕಾಂಗ ಹೊಂದಿರುವ ಭಾರತದ ಆರು ರಾಜ್ಯಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ರಾಜ್ಯ ವಿಧಾನ ಪರಿಷತ್ತಿನಲ್ಲಿ 100 ಸದಸ್ಯರಿದ್ದಾರೆ.
ಏತನ್ಮಧ್ಯೆ, ಉತ್ತರ ಪ್ರದೇಶದ ವಿಧಾನ ಪರಿಷತ್ತಿನಲ್ಲಿ 11 ಸ್ಥಾನಗಳಿಗೆ ಅಂದರೆ ಪದವೀಧರರ ಐದು ಸ್ಥಾನಗಳು ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಆರು ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತದಾನ ನಡೆಯಿತು.
ಸದಸ್ಯರ ಅವಧಿ ಮೇ 6 ರಂದು ಮುಕ್ತಾಯಗೊಂಡಿದ್ದರೂ ಸಾಂಕ್ರಾಮಿಕ ರೋಗದ ಕಾರಣ ಚುನಾವಣೆಯನ್ನು ಮುಂದೂಡಬೇಕಾಯಿತು.