ನವದೆಹಲಿ, ಡಿ. 06 (DaijiworldNews/HR): ಸ್ಟೈಸ್ಜೆಟ್ ಎಸ್ಜಿ-960 ವಿಮಾನದ ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಎತ್ತರವನ್ನು ಪೈಲಟ್ಗಳಿಗೆ ಅಂದಾಜಿಸಲು ಕಷ್ಟವಾಗಿದ್ದು ಲ್ಯಾಂಡಿಗ್ ವೇಳೆ ರನ್ವೇ ಬಳಿ ಇದ್ದ ಮೂರು ದೀಪಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಸ್ಟೈಸ್ಜೆಟ್ ಎಸ್ಜಿ-960 ವಿಮಾನ ಬೆಂಗಳೂರಿನಿಂದ ಗುವಾಹಟಿಗೆ ಪ್ರಯಾಣ ಬೆಳೆಸಿದ್ದು, ಇದರಲ್ಲಿ ಇಬ್ಬರು ಪೈಲಟ್ಗಳು, ನಾಲ್ವರು ಸಿಬ್ಬಂದಿ ಹಾಗೂ 155 ಪ್ರಯಾಣಿಕರಿದ್ದರೆಂದು ತಿಳಿದು ಬಂದಿದೆ.
ಇನ್ನು ಕಡಿಮೆ ಮೋಡವಿದ್ದ ಕಾರಣ ಪೈಲಟ್ಗಳಿಗೆ ವಿಮಾನದ ಎತ್ತರವನ್ನು ಗ್ರಹಿಸಲು ಕಷ್ಟವಾಗಿದ್ದು, ಸರಳ ಲ್ಯಾಂಡಿಂಗ್ ಸಾಧ್ಯವಾಗದಿರಲು ಕಾರಣವಾಯಿತು. ವಿಮಾನವನ್ನು ರನ್ವೇ-2ರಲ್ಲಿ ಇಳಿಸಲಾಯಿತ' ಎಂದು ನಾಗರೀಕ ವಿಮಾನಯಾನ ಇಲಾಖೆಯ ಡೈರೆಕ್ಟರ್ ಜನರಲ್ನ (ಡಿಜಿಐಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.