ತುಮಕೂರು, ಡಿ.06 (DaijiworldNews/HR): ಇತ್ತೀಚೆಗೆ ನಡೆದ ರೌಡಿಶೀಟರ್ ಉಚ್ಚೆಮಂಜ ಕೂಲೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ಮುಂದಾಗಿದ್ದ ಪೊಲೀಸರ ಮೇಲೆ ಡ್ರಾಗರ್ನಿಂದ ಹಲ್ಲೆಗೆ ಮುಂದಾದ ರೌಡಿಶೀಟರ್ ವಿಕಾಸ್ ಅಲಿಯಾಸ್ ವಿಕ್ಕಿ (24) ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಗುಬ್ಬಿ ತಾಲೂಕಿನ ಗೌರಿ ಪುರದ ರೌಡಿಶೀಟರ್ ವಿಕಾಸ್ ಅಲಿಯಾಸ್ ವಿಕ್ಕಿ ಗಾಯಗೊಂಡಿರುವ ಆರೋಪಿ.
ಉಚ್ಚೆ ಮಂಜ ಕೊಲೆ ಕೇಸಿಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಸಿಕೃಷ್ಣ ಅವರು ಮೂರು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿ ಭಾನುವಾರ ಮುಂಜಾನೆ 5:30ರ ಸುಮಾರಿಗೆ ತುಮಕೂರು ಗ್ರಾಮಾಂತರ ಸರಹದ್ದಿನ ಅಜ್ಜಪ್ಪನಹಳ್ಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿದ್ದರು.
ಇನ್ನು ತಿಲಕ್ ಪಾರ್ಕ್ ಠಾಣೆಯ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಲು ತೆರಲಿದ ವೇಳೆ ಆರೋಪಿಯು ಎಎಸ್ಐ ಪರಮೇಶ್ವರರವರಿಗೆ ತನ್ನ ಬಳಿಯಿದ್ದ ಡ್ರಾಗರ್ ನಿಂದ ಹಲ್ಲೆ ಮಾಡಿದ್ದು,ಪ ರಮೇಶ್ವರ ಅವರ ಎಡಗೈ ತೋಳಿಗೆ ಮಾರಣಾಂತಿಕ ಗಾಯವಾಗಿದೆ ಎಂದು ತಿಳಿದು ಬಂದಿದೆ.