ಹಾವೇರಿ,ಡಿ.06 (DaijiworldNews/HR): ಎಚ್.ಡಿ.ಕುಮಾರಸ್ವಾಮಿ ಅವರು ಹೇಳುವ ಹೇಳಿಕೆಗಳನೆಲ್ಲ ಕೇಳಿದರೆ ಅವರು ಪರಿಪಕ್ವ ರಾಜಕಾರಣಿಯಲ್ಲ, ಇನ್ನೂ ಹುಡುಗುತನದ ಬುದ್ಧಿ ಇದೆ ಎಂದೆನಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ತಮ್ಮ ಅವಧಿಯ ಬಳಿಕ ಬಿ.ಎಸ್. ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡದೆ ಪಟ್ಟು ಹಿಡಿದಿದ್ದರು, ಕುಮಾರಸ್ವಾಮಿ ಅವರು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ" ಎಂದರು.
ಇನ್ನು "ಕುಮಾರಸ್ವಾಮಿ ಅವರಿಗೆ ಸ್ವಂತ ಶಕ್ತಿಯಿಲ್ಲ ಅವರು ಬೇರೆ ಯಾರದೋ ಹೆಗಲ ಮೇಲೆ ಕುಳಿತು ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಂದ ಕಣ್ಣೀರು ಹಾಕಿದ್ದೀನಿ ಎಂಬ ಅವರ ಹೇಳಿಕೆ ಸತ್ಯಕ್ಕೆ ದೂರವಾದುದು. ಅವರೊಬ್ಬ ಹಿಟ್ ಅಂಡ್ ರನ್ ಮನುಷ್ಯ ಎಂದು ಆರೋಪಿಸಿದ್ದಾರೆ.