ಅಹ್ಮದಾಬಾದ್,ಡಿ.05 (DaijiworldNews/HR): ಕೊರೊನಾ ಸೋಂಕಿಗೆ ತುತ್ತಾಗಿ ಅಹ್ಮದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಜರಾತ್ ಹೈಕೋರ್ಟ್ನ ಹಾಲಿ ನ್ಯಾಯಾಧೀಶ ಹೃದಯಾಘಾತದಿಂದಾಗಿ ಇಂದು ಮೃತಪಟ್ಟಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಜಸ್ಟಿಸ್ ಜಿ.ಆರ್. ಉಧ್ವಾನಿ(59 ವರ್ಷ)ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅಲ್ಲಿ ಇಂದು ಎಸ್ ಎ ಎಲ್ ಆಸ್ಪತ್ರೆಯಲ್ಲಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಧ್ವಾನಿ ಅವರಲ್ಲಿ ಶ್ವಾಸಕೋಶಕ್ಕೆ ತೀವ್ರ ಸೋಂಕು ಉಂಟಾದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು, ಅವರು ಹೈಪೋಥೈರಾಯ್ಡಿಸಮ್ ನಿಂದಲೂ ಬಳಲುತ್ತಿದ್ದರು. ಡಿಸೆಂಬರ್ 3ರಿಂದ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.