ಅಲಹಾಬಾದ್, ಡಿ.05 (DaijiworldNews/PY): ನವದೆಹಲಿಯಲ್ಲಿ ಮಾರ್ಚ್ನಲ್ಲಿ ತಬ್ಲೀಘಿ ಜಮಾತ್ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮೌ ನಿವಾಸಿಯ ವಿರುದ್ಧ ಕೊಲೆ ಯತ್ನದ ಆರೋಪ ಹೊರಿಸಿದ್ದು, "ಕಾನೂನಿನ ಅಧಿಕಾರವನ್ನು ದುರುಪಯೋಗ ಮಾಡಿದಂತಾಗಿದೆ" ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
"ಭಾರತೀಯ ದಂಡ ಸಂಹಿತೆ ಸೆಕ್ಷನ್ 307ರ ಅಡಿಯಲ್ಲಿ ವಿಚಾರಣೆಯನ್ನು ತಡೆಹಿಡಿದು ಹೈಕೋರ್ಟ್ ಈ ಅವಲೋಕನ ಮಾಡಿದೆ. ತಬ್ಲಿಘಿ ಕಾರ್ಯಕ್ರಮದಲ್ಲಿ ಮೊಹಮ್ಮದ್ ಸಾದ್ ಪಾಲ್ಗೊಳ್ಳುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಉದ್ದೇಶಪೂರ್ವಕವಾಗಿ ತಿಳಿಸಿಲ್ಲ ಹಾಗೂ ದೆಹಲಿಯಿಂದ ಹಿಂದಿರುಗಿದ ನಂತರ ಸ್ವಯಂಪ್ರೇರಿತ ಕ್ವಾರಂಟೈನ್ಗೆ ಒಳಗಾಗಿಲ್ಲ" ಎಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದ ಕಾರಣ ಕೋರ್ಟ್ ಈ ರೀತಿಯಾಗಿ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ದ ಸಲ್ಲಿಸಲಾದ ಆರೋಪಪಟ್ಟಿಯನ್ನು ಪ್ರಶ್ನಿಸಿ ಸಾದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಜಯ್ ಭನೋಟ್ ಅವರು ಈ ಆದೇಶವನ್ನು ನೀಡಿದ್ದಾರೆ.
"ಕೊರೊನಾ ಸಂಕ್ರಾಮಿಕ ಹರಡಿದ್ದ ಹಿನ್ನೆಲೆ ಈ ಹಿಂದೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಬಳಿಕ ಅದನ್ನು ಪುನಃ ತೆಗೆದುಕೊಳ್ಳಲಾಗಿತ್ತು. ಬಳಿಕ ಅದನ್ನು ಕೊಲೆ ಯತ್ನಕ್ಕಾಗಿ ಎಂದು ಹೊಸ ಆರೋಪಪಟ್ಟಿ ಸಲ್ಲಿಸಲಾಗಿದೆ" ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯ ದಿನವನ್ನು ನ್ಯಾಯಾಲಯವು ಡಿಸೆಂಬರ್ 15ಕ್ಕೆ ನಿಗದಿಪಡಿಸಿದೆ.