ಬೆಳಗಾವಿ,ಡಿ.05 (DaijiworldNews/HR): ಕಾಂಗ್ರೆಸ್ ನಾಯಕತ್ವ ದೇಶದ ಎಲ್ಲೆ ದಾಟಿ ಕ್ರಾಸ್ ಬೀಡ್ ಆದ ಕಾರಣ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಈ ಕುರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯನವರು ಇತ್ತೀಚೆಗೆ ವಿಚಿತ್ರವಾಗಿ ಮಾತನಾಡುತ್ತಿದ್ದು, ಗೋ ಹತ್ಯೆ ತಡೆಯಲು ನಾವು ಮುಂದಾಗಿದ್ದೇವೆ. ಆದರೆ, ಮುದಿ ಎತ್ತುಗಳನ್ನು ಇಟ್ಟುಕೊಂಡು ಏನು ಮಾಡುತ್ತಾರೆ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ನಮ್ಮ ರೈತರು ಭಾವನೆಗಳೊಂದಿಗೆ ಬದುಕುತ್ತಾರೆ. ಗೋವುಗಳು ಮುದಿಯಾದವೆಂದು ಮಾರಲು ಹೋಗುವುದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಇನ್ನು "ಗೋ ಹತ್ಯೆ ನಿಷೇಧವನ್ನು ನಾವು ಮಾಡುತ್ತೇವೆ ಅದು ನಮ್ಮ ಪಕ್ಷದ ಬದ್ಧತೆ. ರಾಮಮಂದಿರ ಕಟ್ಟುತ್ತಾರಾ ಎನ್ನುತ್ತಿದ್ದರು. ಈಗ, ಪ್ರಾರಂಭವಾಗಿಲ್ಲವೇ? ಹೀಗೆ, ನಮ್ಮ ಪಕ್ಷ ಕೊಟ್ಟ ಮಾತಿಗೆ ತಪ್ಪಿ ನಡೆಯುವುದಿಲ್ಲ. ಬಿಜೆಪಿಯು ರಾಷ್ಟ್ರವಾದಿ ಪಕ್ಷ ದೇಶ ಬಲಪಡಿಸಲು ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ" ಎಂದು ಹೇಳಿದ್ದಾರೆ.