ಬೆಂಗಳೂರು, ಡಿ.05 (DaijiworldNews/PY): "ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಬಿಜೆಪಿಯ ಹಲವು ನಾಯಕರಿಗೆ ಸಂಪರ್ಕವಿದೆ" ಎಂದು ಕಾಂಗ್ರೆಸ್ ತಮಿಳುನಾಡು ಉಸ್ತುವಾರಿ ದಿನೇಶ್ ಗುಂಡು ರಾವ್ ಹೇಳಿದ್ದಾರೆ.
"ತಮಿಳುನಾಡು ಚುನಾವಣೆಯಲ್ಲಿ ರಜನಿಕಾಂತ್ ಅವರ ಪಕ್ಷದ ವಿಚಾರವಾಗಿ ಈಗಲೇ ಏನು ಹೇಳಲಾಗದು. ಚುನಾವಣಾ ಮಾರ್ಗಸೂಚಿ ಸೇರಿದಂತೆ ಅವರ ಪಕ್ದ ಸಿದ್ಧಾಂತಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ" ಎಂದಿದ್ದಾರೆ.
"ಅವರ ಪಕ್ಷದ ಬಗ್ಗೆ ಸ್ಷಷ್ಟನೆ ಬಂದ ಬಳಿಕ ನಾವು ಆ ಬಗ್ಗೆ ತೀರ್ಮಾನಿಸಲು ಸಾಧ್ಯ. ಆದರೆ, ಇನ್ನೂ ಕೂಡಾ ಅವರ ಪಕ್ಷ ಯಾವುದೆಂದು ನೋಂದಣಿಯಾಗಿಲ್ಲ. ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣೆಯ ಸಂದರ್ಭ ಸ್ವತಂತ್ರವಾಗಿ ಹೋರಾಡುತ್ತದೆಯೋ ಅಥವಾ ಮೈತ್ರಿ ಮಾಡುಕೊಳ್ಳಲಿದೆಯೇ ಎನ್ನುವ ವಿಚಾರದ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ" ಎಂದು ಹೇಳಿದ್ದಾರೆ.