ಬೆಳಗಾವಿ,ಡಿ.05 (DaijiworldNews/HR): ಕಣ್ಣೀರು ಹಾಕುವುದು ದೇವೇಗೌಡ ಮನೆಯವರ ಸಂಸ್ಕೃತಿಯಾಗಿದ್ದು ಇನ್ಯಾರನ್ನೋ ನಂಬಿಸಲು ಕಣ್ಣೀರು ಹಾಕುತ್ತಾರೆ, ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ ಸಮಯಕ್ಕೆ ತಕ್ಕಂತೆ ಅವರು ಸುಳ್ಳು ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರು ಹಾಳು ಮಾಡಿದ್ದರು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್ ನಿಂದ ಕುಮಾರಸ್ವಾಮಿ ಸಿಎಂ ಆಗಿದ್ದರು, ಇವರು ವೆಸ್ಟರ್ನ್ ಹೊಟೆಲ್ ನಿಂದ ಆಡಳಿತ ನಡೆಸಿದ್ದರು. ಇವರ ಕೇಂದ್ರ ಸ್ಥಾನ ಹೊಟೇಲ್ ಆಗಿತ್ತು" ಎಂದರು.
ಇನ್ನು ಕಾಂಗ್ರೆಸ್ ಶಾಸಕರಿಗೆ 1900 ಕೋಟಿ ರೂ. ಹಣ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇವರ ಮನೆಯಿಂದ ಹಣ ತಂದು ಕೊಟ್ಟಿದ್ದಾರಾ, ನಮ್ಮ ಶಾಸಕರು ಬೆಂಬಲ ಕೊಟ್ಟಿದ್ದಕ್ಕೆ ಅವರು ಸಿಎಂ ಆಗಿದ್ದಾರೆ ತಿರುಗೇಟು ನೀಡಿದ್ದಾರೆ.