ನವದೆಹಲಿ, ಡಿ.05 (DaijiworldNews/PY): "ದೇಶಕ್ಕೆ ಅನ್ನ ನೀಡುವ ರೈತರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಎಂಎಸ್ಪಿ-ಎಪಿಎಂಸಿ ಇಲ್ಲದೇಬಿಹಾರದ ರೈತರು ತೀವ್ರವಾದ ತೊಂದರೆಯಲ್ಲಿದ್ದಾರೆ. ಈಗ ಪ್ರಧಾನ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಆ ಬಾವಿಗೆ ತಳ್ಳಿದ್ದಾರೆ" ಎಂದು ತಿಳಿಸಿದ್ದಾರೆ.
"ಬಿಹಾರದ ರೈತರು ಸಂಕಷ್ಟದಲ್ಲಿರುವ ಇಂತಹ ಪರಿಸ್ಥಿತಿಯಲ್ಲಿ ಇಡೀ ದೇಶಕ್ಕೆ ಅನ್ನ ನೀಡುವ ರೈತರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗಿದೆ" ಎಂದಿದ್ದಾರೆ.